ಮುಖಪುಟ / ಜೆನೆರಿಕ್ ಔಷಧಿ ಹುಡುಕಾಟ

ಉಚಿತ · ಲಾಗಿನ್ ಬೇಕಿಲ್ಲ · ನಿಮ್ಮ ಮಾಹಿತಿ ನಿಮ್ಮ ಫೋನ್‌ನಲ್ಲೇ ಇರುತ್ತದೆ

ಜೆನೆರಿಕ್ ಔಷಧಿ ಹುಡುಕಾಟ

ಸ್ಟ್ರಿಪ್ ಮೇಲಿನ ಹೆಸರು, ಉದಾಹರಣೆಗೆ Dolo 650, ಅಥವಾ metformin 500 ನಂತಹ ಸಾಲ್ಟ್ ಟೈಪ್ ಮಾಡಿ. ಅದರಲ್ಲಿ ಏನಿದೆ, ಅದೇ ಸಾಲ್ಟ್ ಮತ್ತು ಪ್ರಮಾಣದ Jan Aushadhi ಔಷಧಿ ಯಾವುದು ಎಂದು ನೋಡಿ.

ಸದ್ಯಕ್ಕೆ ಈ ಟೂಲ್‌ನ ಬಟನ್‌ಗಳು ಇಂಗ್ಲಿಷ್‌ನಲ್ಲಿವೆ. ಕೆಳಗಿನ ಹಂತಗಳು ಅವನ್ನು ವಿವರಿಸುತ್ತವೆ.

Jan Aushadhi list snapshot: 1 November 2026

ಹೇಗೆ ಬಳಸುವುದು

  1. ಹುಡುಕಾಟ ಬಾಕ್ಸ್‌ನಲ್ಲಿ ಔಷಧಿಯ ಹೆಸರು ಟೈಪ್ ಮಾಡಿ.
  2. ತೋರಿಸಿದ ಸಾಲ್ಟ್ ಮತ್ತು ಪ್ರಮಾಣ ಪರಿಶೀಲಿಸಿ.
  3. Jan Aushadhi ಸಮಾನ ಔಷಧಿ ಮತ್ತು ಅದರ ಬೆಲೆ ನೋಡಿ, ಬದಲಿಸುವ ಮೊದಲು ವೈದ್ಯರು ಅಥವಾ ಫಾರ್ಮಸಿಸ್ಟ್‌ರನ್ನು ಕೇಳಿ.

ಜನರು ಕೇಳುವ ಪ್ರಶ್ನೆಗಳು

ಜೆನೆರಿಕ್ ಔಷಧಿಗಳು ಬ್ರ್ಯಾಂಡ್‌ನಷ್ಟೇ ಒಳ್ಳೆಯವೇ?

ಅದೇ ಸಾಲ್ಟ್ ಮತ್ತು ಪ್ರಮಾಣದ ಜೆನೆರಿಕ್ ಔಷಧಿಗಳು ಅದೇ ಗುಣಮಟ್ಟದ ಮಾನದಂಡ ಪಾಲಿಸಬೇಕು. ಔಷಧಿ ಬದಲಿಸುವ ಮೊದಲು ವೈದ್ಯರನ್ನು ಕೇಳಿ.

Jan Aushadhi ಔಷಧಿಗಳನ್ನು ಎಲ್ಲಿ ಖರೀದಿಸಬಹುದು?

ಭಾರತದಾದ್ಯಂತ ಇರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ. ಅಧಿಕೃತ ಆ್ಯಪ್ ಹತ್ತಿರದ ಕೇಂದ್ರವನ್ನು ತೋರಿಸುತ್ತದೆ.

ಇದು ವೈದ್ಯಕೀಯ ಸಲಹೆಯೇ?

ಅಲ್ಲ. ಇದು ಹೆಸರು ಮತ್ತು ಬೆಲೆ ಹೋಲಿಸಲು ಮಾತ್ರ ನೆರವಾಗುತ್ತದೆ. ನಿಮ್ಮ ವೈದ್ಯರ ಚೀಟಿಯನ್ನೇ ಪಾಲಿಸಿ.

Search by task, life event, format or tool name, in English, हिंदी or Hinglish.