ಮುಖಪುಟ / ಜೀವನದ ಘಟನೆಗಳು, ಹಂತ ಹಂತವಾಗಿ
ಉಚಿತ · ಲಾಗಿನ್ ಬೇಕಿಲ್ಲ · ನಿಮ್ಮ ಮಾಹಿತಿ ನಿಮ್ಮ ಫೋನ್ನಲ್ಲೇ ಇರುತ್ತದೆ
ಜೀವನದ ಮುಖ್ಯ ಸಂದರ್ಭಗಳು, ಹಂತ ಹಂತವಾಗಿ
ಜೀವನದಲ್ಲಿ ದೊಡ್ಡ ಘಟನೆ ನಡೆದಾಗ ಕಾಗದಪತ್ರದ ಕೆಲಸ ಇದ್ದೇ ಇರುತ್ತದೆ. ಸಂದರ್ಭ ಆರಿಸಿ, ಮೊದಲು ಏನು ಮಾಡಬೇಕು, ಯಾವ ದಾಖಲೆಗಳು ಬೇಕು, ಎಲ್ಲಿ ಅರ್ಜಿ ಹಾಕಬೇಕು ಎಂದು ನೋಡಿ.
ಹೇಗೆ ಬಳಸುವುದು
- ಕೆಳಗಿನ ಪಟ್ಟಿಯಿಂದ ಜೀವನದ ಒಂದು ಘಟನೆ ಆರಿಸಿ.
- ಹಂತಗಳನ್ನು ಕ್ರಮವಾಗಿ ಪಾಲಿಸಿ; ಪ್ರತಿ ಹಂತದಲ್ಲಿ ದಾಖಲೆಗಳು, ಶುಲ್ಕ ಮತ್ತು ಅಧಿಕೃತ ಲಿಂಕ್ ಇದೆ.
- “I want to…” ಬಾಕ್ಸ್ನಲ್ಲಿ ನಿಮಗೆ ಬೇಕಾದ್ದನ್ನು ಟೈಪ್ ಕೂಡ ಮಾಡಬಹುದು.
ಜನರು ಕೇಳುವ ಪ್ರಶ್ನೆಗಳು
ಮಾರ್ಗದರ್ಶಿಗಳು ನನ್ನ ಭಾಷೆಯಲ್ಲಿವೆಯೇ?
ಪಟ್ಟಿ ನಿಮ್ಮ ಭಾಷೆಯಲ್ಲಿದೆ; ಪೂರ್ಣ ಮಾರ್ಗದರ್ಶಿಗಳು ಸದ್ಯಕ್ಕೆ ಇಂಗ್ಲಿಷ್ನಲ್ಲಿ ತೆರೆಯುತ್ತವೆ, ಹಿಂದಿಯಲ್ಲೂ ಲಭ್ಯವಿವೆ.
ಶುಲ್ಕಗಳು ಸರಿಯಾಗಿವೆಯೇ?
ಪ್ರತಿ ಮಾರ್ಗದರ್ಶಿ ಅಧಿಕೃತ ಮೂಲ ಮತ್ತು ನಾವು ಕೊನೆಯ ಬಾರಿ ಪರಿಶೀಲಿಸಿದ ದಿನಾಂಕ ತೋರಿಸುತ್ತದೆ. ಶುಲ್ಕ ಬದಲಾಗಬಹುದು, ಅಧಿಕೃತ ಸೈಟ್ನಲ್ಲಿ ಖಚಿತಪಡಿಸಿಕೊಳ್ಳಿ.
ನನಗೆ ಏಜೆಂಟ್ ಬೇಕೇ?
ಇವುಗಳಲ್ಲಿ ಹೆಚ್ಚಿನ ಸೇವೆಗಳನ್ನು ನೀವೇ ಆನ್ಲೈನ್ನಲ್ಲಿ ಅಥವಾ ಕಾಮನ್ ಸರ್ವೀಸ್ ಸೆಂಟರ್ನಲ್ಲಿ ಮಾಡಿಕೊಳ್ಳಬಹುದು.